ಅಂದೋಲಾ ಮಠದ ಸ್ವಾಮೀಜಿ, ಕಲ್ಲು ತೂರಾಟ ಪೊಲೀಸರಿಗೆ ಗಾಯ | Oneindia Kannada

2017-10-31 1

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯನ್ನು ಕೊಲೆಯತ್ನಕ್ಕೆ ಪ್ರಚೋದನೆ ಆರೋಪದಲ್ಲಿ ಬಂಧಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜೇವರ್ಗಿ ಪೊಲೀಸರು‌ ಸ್ವಾಮೀಜಿಯನ್ನು ಬಂಧಿಸಿದ್ದು, ಅವರು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಕೂಡಾ ಆಗಿದ್ದಾರೆ. ಇದೇ ತಿಂಗಳು ಹದಿನಾಲ್ಕರಂದು ಆಂದೋಲಾ ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಅಂಗಡಿಗಳ ತೆರವು‌ ಸಂಬಂಧ ಗಲಾಟೆಯಾಗಿತ್ತು. ಘಟನೆಯಲ್ಲಿ ನಸಿರುದ್ದೀನ್ ಎಂಬಾತ ಗಾಯಗೊಂಡಿದ್ದ. ಈ ಘಟನೆಗೆ ಸ್ವಾಮೀಜಿ ಪ್ರಚೋದನೆಯೇ ಕಾರಣ ಎಂದು ನಸಿರುದ್ದೀನ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಆದರೆ ಬಂಧನದ ಕ್ರಮ ಖಂಡಿಸಿ ಗ್ರಾಮಸ್ಥರು ಹಾಗೂ ಬೆಂಬಲಿಗರು, ಅಭಿಮಾನಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ‌ ಸೇನೆ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.


Andola mutt seer arrested by police on the allegation of abatement of murder attempt. After arrest protest from Sri Rama Sene activists and tense situation in Jevargi, Kalaburagi district.

Videos similaires